ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದು, ಸರ್ವರಿಗೆ ಸುಖ ಶಾಂತಿ ನೆಮ್ಮದಿ, ಆರೋಗ್ಯ, ಸಮೃದ್ಧಿ ಕರುಣಿಸಲೆಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಸಲಾದ ಧನ್ವಂತರಿ ಹೋಮ, ಕ್ರಿಮಿಹಾರ ಸೂಕ್ತ ಹೋಮ, ಚಂಡಿಕಾ ಯಾಗ, ಶ್ರೀ ಸುಬ್ರಹ್ಮಣ್ಯ ದೇವರ ಪ್ರಸಾದವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಮುಜರಾಯಿ ಸಚಿವಾರಾದ ಸನ್ಮಾನ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಮತ್ತು ಮೀನುಗಾರಿಕಾ ಸಚಿವರಾದ ಸನ್ಮಾನ್ಯ ಎಸ್. ಅಂಗಾರವರ ಮೂಲಕ ಮುಟ್ಟಿಸಲಾಯಿತು. ಪುತ್ತೂರು ಶಾಸಕರಾದ ಸನ್ಮಾನ್ಯ ಸಂಜೀವ ಮಠಂದೂರು ಮತ್ತು ಬಂಟ್ವಾಳ ಶಾಸಕರಾದ ಸನ್ಮಾನ್ಯ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.