ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿಯ ವಿಷಯವಾಗಿ ಮಾಸ್ಟರ್ ಪ್ಲಾನ್ ಸಭೆಯನ್ನು 13/07/2021 ರಂದು ನಡೆಸಲಾಯಿತು.
ಮಾನ್ಯ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಮಾನ್ಯ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಶ್ರೀ ಅಂಗಾರ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಶ್ರೀಮತಿ ರೋಹಿಣಿ ಸಿಂಧೂರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ವ್ಯವಸ್ಥಾಪನಾ ಸಮೀತಿ ಸದಸ್ಯರು, ಮಾಸ್ಟರ್ ಪ್ಲಾನ್ ಸದಸ್ಯರು, PWD ಹಾಗೂ ಇನ್ನಿತರ ಮುಜರಾಯಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಒಟ್ಟು 10 ಯೋಜನೆಗಳನ್ನು ಮುಂದಿನ ಹಂತದಲ್ಲಿ ಕೈಗೆತ್ತಿಕೊಳ್ಳಲು ನಿರ್ಣಯಿಸಲಾಯಿತು.
1) ದೇವಸ್ಥಾನದ ಎದುರಿನ ರಥ ಬೀದಿಯ ಇಕ್ಕೆಲಗಳಲ್ಲಿ ಯಾವತ್ತಿಗೂ ಅಳಿಸಲಾಗಂತಹ ಶಿಲಾಮಯವಾದ ಮತ್ತು ನಮ್ಮ ತುಳುನಾಡಿನ ಪಾರಂಪರಿಕ ರೀತಿಯ ಕಟ್ಟಡ ನಿರ್ಮಾಣ. ಇದರಲ್ಲಿ ಅಂದಾಜು ಮುಂದಿನ 100 ವರ್ಷಗಳನ್ನು ಮನದಲ್ಲಿಟ್ಟುಕೊಂಡು ಅದಕ್ಕೆ ಸರಿಯಾದಂತೆ ಮಾಹಿತಿ ಕೇಂದ್ರ, ಸೇವಾ ಕೌಂಟರ್, ಮಹಿಳೆ ಮತ್ತು ಪುರುಷರ ವಿಶ್ರಾಂತಿ ಗ್ರಹ, ಸೆಕ್ಯೂರಿಟಿ ಆಫೀಸ್, ಹಣ್ಣುಕಾಯಿ, ಬೆಳ್ಳಿ ಅಂಗಡಿ, ಲಗ್ಗೇಜ್ ರೂಮ್, ವಾಚನಾಲಯ, ಗಣ್ಯ ವ್ಯಕ್ತಿಗಳ ವಿಶ್ರಾಂತಿ ಗ್ರಹ, ವಸ್ತುಸಂಗ್ರಹಾಲಯ, ಚಪ್ಪಲಿ ಸ್ಟಾಂಡ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, First Aid Center, ವಸತಿಗ್ರಹಗಳ ಕಾರ್ಯಾಲಯ, ಮುಂದಿನ ದಿನಗಳಿಗೆ ಬೇಕಾಗುವ Q ಕಾಂಪ್ಲೆಕ್ಸ್ಗಳು, ಸಾರ್ವಜನಿಕ ಶೌಚಾಲಯ ಹಾಗು ಭಕ್ತರಿಗೆ ಅವಶ್ಯವಾಗಿರುವ ಇತರ ಸೇವಾ ಚಟುವಟಿಕ ಕೇಂದ್ರಗಳಿರಲಿವೆ.
2) ದೇವಸ್ಥಾನದ ಉತ್ತರ ಭಾಗದಲ್ಲಿ ಹೊಂದಿಕೊಂಡಂತೆ ಶಿಲಾಮಯಾವಾದ ಆಶ್ಲೇಷ ಬಲಿ ಮತ್ತು ಸಂಕಲ್ಪ ಮಂದಿರ ನಿರ್ಮಾಣ. ಇದರಲ್ಲಿ ಏಕ ಕಾಲದಲ್ಲಿ 1000 ಆಶ್ಲೇಷ ಬಲಿ ಪೂಜೆ, ಸತ್ಯನಾರಾಯಣ ದೇವರ ಪೂಜೆಗೆ ಸ್ಥಳಾವಕಾಶ, ಪ್ರಸಾದ ವಿತರಣಾ ಕೌಂಟರ್ಗಳು ಹಾಗು ಲಡ್ಡು ಪ್ರಸಾದ, ಪಂಚಕಜ್ಜಾಯದ ಪಾಕಶಾಲೆ ಇರಲಿದೆ
3) ದೇವಳದ ಉತ್ತರ ವಾಯುವ್ಯ ಭಾಗದಲ್ಲಿ 3000 ಜನ ಏಕ ಕಾಲದಲ್ಲಿ ಹಾಗು ದಿನವೊಂದಕ್ಕೆ ಅಂದಾಜು 60 ರಿಂದ 70 ಸಾವಿರ ಜನರು ಯಾವುದೇ ಅಡೆ ತಡೆಯಿಲ್ಲದೆ ದೇವರ ಅನ್ನ ಪ್ರಸಾದ ಸ್ವೀಕರಿಸುವಂತೆ, ಉಗ್ರಾಣಗಳು ಸೇರಿದಂತೆ ಅತ್ಯಾಧುನಿಕ ರೀತಿಯ ಅನ್ನ ಛತ್ರದ ನಿರ್ಮಾಣ.
4) ದೇವಳಕ್ಕೆ ಆದಾಯ ಬರುವಂತಹ ನಿಟ್ಟಿನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಇದರಲ್ಲಿ ಸ್ಥಳೀಯರಿಗೆ ಅನುಕೂಲ ಆಗುವಂತೆ ಅಂಗಡಿ ಮಳಿಗೆ, ಬ್ಯಾಂಕ್, ಹೋಟೆಲ್, ಪಾರ್ಕಿಂಗ್, ಶೌಚಾಲಯಗಳು, ಯಾತ್ರಿ ನಿವಾಸದ ರೀತಿಯ ಮಿನಿಮಮ್ ಚಾರ್ಜ್ ಇರುವ ಡಾರ್ಮೆಟರಿಗಳು, Medical OPD ಸೆಂಟರ್ಗಳು ಇರಲಿವೆ
5) Community Hall
6) Multiple Parking ವ್ಯವಸ್ಥೆ
7) ಕುಮಾರದಾರದಲ್ಲಿ ಶಿಲಾಮಯವಾದ ಸ್ನಾನಘಟ್ಟ, ವಾಹನ ಪಾರ್ಕಿಂಗ್ ವ್ಯವಸ್ಥೆ ಹಾಗು ಸರ್ಪ ಸಂಸ್ಕಾರ ಮಂದಿರದ ಹತ್ತಿರ ಪುಷ್ಕರಣ.
8.) ಪೂರ್ತಿ ದೇವಸ್ಥಾನದ ಕಟ್ಟಡಗಳಿಗೆ ಮುಂದಿನ 30 ವರ್ಷಗಳಿಗೆ ಬೇಕಾಗುವಂತಹ 3 ಮೇಗಾವ್ಯಾಟ್ ಕ್ಯಾಪಾಸಿಟಿ ಇರುವಂತಹ ಪವರ್ ಸ್ಟೇಷನ್ ಸೋಲಾರ್ ವ್ಯವಸ್ಥೆಯ ಪೂರ್ತಿ ಲಾಭವನ್ನು ಪಡೆದುಕೊಂಡು ಮತ್ತು ಆಟೋಮೇಟೆಡ್ ಜನರೇಟರ್ ವ್ಯವಸ್ಥೆ ಒಳಗೊಂಡಂತೆ ವಿದ್ಯುತ್ತು ನಿರ್ವಹಣಾ ಘಟಕದ ನಿರ್ಮಾಣ.
9) ಐನೆಕಿದುವಿನಲ್ಲಿ ಸುಮಾರು 100 ಎಕರೆಯಲ್ಲಿ ಗೋ ಶಾಲೆ
10) ಇಂಜಾಡಿ ತೋಟದ ಬಳಿ ಪ್ರಕೃತಿ ಮತ್ತು ಯೋಗ ಆಸ್ಪತ್ರೆ ಹಾಗು ಧ್ಯಾನ ಕುಟೀರಗಳ ನಿರ್ಮಾಣ ಮಾಡುವುದೆಂದು ತೀರ್ಮಾನಿಸಲಾಯಿತು.
ಇದರೊಂದಿಗೆ ಕೋರ್ಟು ಕಲಾಪಗಳು ಮುಗಿದ ಕೂಡಲೇ ದೇವಸ್ಥಾನದ ಒಳಗಿನ ಸುತ್ತುಪೌಳಿಯ ಕಾಮಗಾರಿಯನ್ನು ಹಾಗೂ ಈಗಾಗಲೇ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಂದುವರಿಸುವುದೆಂದು ತೀರ್ಮಾನಿಸಲಾಗಿದೆ.