ಶ್ರೀ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ "ಬೃಹತ್ ವನಸಂವರ್ಧನಾ ಕಾರ್ಯಕ್ರಮ”, ಭೂಮಿ ಸುಪೊಷಣ್ ಕಾರ್ಯಕ್ರಮ" ಕ್ಕೆ ಹಿರಿಯರಿಂದ ಏಕ ಕಾಲದಲ್ಲಿ 14 ಕಡೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿ, ಕ್ಷೇತ್ರ ಶಾಸಕರು ಮೀನುಗಾರಿಕೆ ಮತ್ತು ಬಂದರು ಸಚಿವರಾದ ಸನ್ಮಾನ್ಯ ಶ್ರೀ ಎಸ್. ಅಂಗಾರ, ಶಾಸಕರಾದ ಶ್ರೀ ರಾಜೇಶ್ ನಾಯ್ಕ, ಉಮಾನಾಥ ಕೋಟ್ಯಾನ್, ಶ್ರೀ ಹರೀಶ್ ಪೂಂಜ, ಶ್ರೀ ಸಂಜೀವ ಮಠಂದೂರು, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಶ್ರೀಮತಿ ರೋಹಿಣಿ ಸಿಂಧೂರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ಗೋವಿಂದ ಭಟ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನರಾಮ್ ಸುಳ್ಳಿ ಹಾಗು ಹಿರಿಯರು ಉಪಸ್ಥಿತರಿದ್ದರು. 2000 ಕ್ಕೂ ಮಿಕ್ಕಿ ಗಿಡಗಳಗಳನ್ನು ನೆಡುವ ಯೋಜನೆಯೊಂದಿಗೆ ಪ್ರತಿ ಗಿಡದ ಸಂರಕ್ಷಣೆಗಾಗಿ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದ್ದು ಅವರ ಉಸ್ತುವಾರಿಯಲ್ಲಿ ಗಿಡಗಳ ಸಂರಕ್ಷಣೆ, ಪೋಷಣೆ ನಡೆಯಲಿದೆ. ಸೇವಾ ಭಾರತಿ ಕಾರ್ಯಕರ್ತರು, ದೇವಸ್ಥಾನದ ಎಲ್ಲಾ ನೌಕರರ ಮುತುವರ್ಜಿ, ಅರಣ್ಯ ಇಲಾಖೆ, ಕುಕ್ಕೆ ಸುಭ್ರಮಣ್ಯದ ಸ್ಥಳೀಯ ಸ್ವಯಂ ಸೇವಕ ಯುವಕರ ಅದ್ಭುತ ಸಹಕಾರ, ಗ್ರಾಮಪಂಚಾಯತ್ ಸುಬ್ರಮಣ್ಯ, ಯುವ ಬ್ರಿಗೇಡ್ ಸುಬ್ರಮಣ್ಯ, ಐನೆಕಿದು, ಯೇನೆಕಲ್ಲಿನ ಯುವಕಮಂಡಲ, ಕೇಸರಿ ಬಳಗ, ಆಟೋ, ಟ್ಯಾಕ್ಸಿ ಚಾಲಕ ಮಾಲಕರ ಸಂಘ ಹಾಗೂ ಇತರ ಎಲ್ಲಾ ಸಂಯೋಜಕರು ರಾತ್ರಿ ಹಗಲು ಎನ್ನದೆ ಕೈ ಜೋಡಿಸಿಕೊಂಡ ಪರಿಣಾಮ ನಮ್ಮ ಹಸಿರು ಕುಕ್ಕೆಯ ಯೋಜನೆಯು ಯಶಶ್ವಿಯಾಗಿ ಸಂಪನ್ನಗೊಂಡಿತು.