Discussion with Minister about Development works


ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಮಾಸ್ಟರ್ ಪ್ಲಾನ್ ಮೂರನೇ ಹಂತದ ಕಾಮಗಾರಿಗಳ ಬಗ್ಗೆ ರಾಜ್ಯದ ಮುಜರಾಯಿ ಸಚಿವೆ ಸನ್ಮಾನ್ಯ ಶ್ರೀಮತಿ ಶಶಿಕಲಾ ಜೊಲ್ಲೆ ಅವರಿಗೆ ಸುಳ್ಯ ಕ್ಷೇತ್ರದ ಶಾಸಕರು, ಮಾನ್ಯ ಸಚಿವರು ಆಗಿರುವ ಶ್ರೀ ಎಸ್ ಅಂಗಾರ ಅವರ ನೇತೃತ್ವದಲ್ಲಿ ವಿಕಾಸಸೌಧದ ಕಚೇರಿಗೆ ಭೇಟಿ ನೀಡಿ ವಿವರಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಈ ಯೋಜನೆಯ ಬಗ್ಗೆ ಮುಜರಾಯಿ ಸಚಿವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಇದುವರೆಗೆ ಮೊದಲ ಮತ್ತು ಎರಡನೇ ಹಂತದಲ್ಲಿ ನಡೆದಿರುವಂತಹ ಕಾಮಗಾರಿಗಳ ವಿವರಗಳನ್ನು ಕೂಡ ನೀಡಲಾಯಿತು . ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ನಡೆಯುವ ಕಾರ್ಯಚಟುವಟಿಕೆಗಳ, ಸೇವೆಗಳ ವಿವರಗಳನ್ನು ಪಡೆದುಕೊಂಡರು ಆದಷ್ಟು ಶೀಘ್ರದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುವುದಾಗಿ ಈ ಸಂದರ್ಭದಲ್ಲಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಸದಸ್ಯ ಪ್ರಸನ್ನ ದರ್ಬೆ, ಪ್ರಮುಖರಾದ ಎ ವಿ ತೀರ್ಥರಾಮ, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ ಸುಭೋದ್ ಶೆಟ್ಟಿ ಮೇನಾಲ ಉಪಸ್ಥಿತರಿದ್ದರು.