ಭಕ್ತಾದಿಗಳಿಗೆ ಪ್ರತಿನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಶ್ರೀ ದೇವಳದಿಂದ ಉಚಿತ ಭೋಜನ ವ್ಯವಸ್ಥೆ ಇದೆ. ಛತ್ರಗಳಲ್ಲಿ ಕೋಣೆಗಳು ಬಾಡಿಗೆಗೆ ದೊರೆಯುತ್ತವೆ. ಭಕ್ತಾದಿಗಳ ಲಗ್ಗೇಜುಗಳನ್ನು ಇಟ್ಟುಕೊಳ್ಳಲು ಛತ್ರದ ಕಛೇರಿಯಲ್ಲಿ ದಿನದ 24-ಗಂಟೆಗಳ ಕಾಲ ಉಚಿತ ವ್ಯವಸ್ಥೆ ಇರುವುದು. ಭಕ್ತಾದಿಗಳು ಶ್ರೀ ದೇವಳದ ಎದುರಿರುವ ದರ್ಪಣತೀರ್ಥದಲ್ಲಿ ಆಥವಾ ಆಧಿಸುಬ್ರಹ್ಮಣ್ಯದಲ್ಲಿ ಆಥವ ಸುಮಾರು 1.2 K.M ದೊರವಿರುವ ಕುಮಾರಧಾರಾ ನದಿದಂಡೆಗಳಲ್ಲಿ ಸ್ನಾನ ಮಾಡಬಹುದಾಗಿದೆ. ಸಮೀಪದ ರೈಲ್ವೆ ಸ್ಟೇಷನ್ : ನೆಟ್ಟಣ ರೈಲ್ವೆ ಸ್ಟೇಷನ್ - ಸುಮಾರು 15 ಕಿ.ಮೀ. ಪುತ್ತೂರು ರೈಲ್ವೆ ಸ್ಟೇಷನ್ - ಸುಮಾರು 60 ಕಿ.ಮೀ. ಮಂಗಳೂರು ರೈಲ್ವೆ ಸ್ಟೇಷನ್ - ಸುಮಾರು 110 ಕಿ.ಮೀ. ಸಮೀಪದ ವಿಮಾನ ನಿಲ್ದಾಣ : ಬಜಪೆ (ಮಂಗಳೂರು) - ಸುಮಾರು 120 ಕಿ.ಮೀ. ಬೆಂಗಳೂರು ಅಂತರಾಷ್ರೀಯ ವಿಮಾನ ನಿಲ್ದಾಣ - ಸುಮಾರು 300 ಕಿ.ಮೀ. ಬೆಂಗಳೂರು , ಮೈಸೂರು, ಹಾಸನ, ಮಂಗಳೂರು, ಮಡಿಕೇರಿ, ಸುಳ್ಯ, ಪುತ್ತೂರು, ಧರ್ಮಸ್ಥಳ ಇತ್ಯಾದಿ ಕಡೆಗಳಿಂದ ಸಾಕಷ್ಟು ಕೆ.ಎಸ್.ಅರ್.ಟಿ.ಸಿ. ಬಸ್ ಸೌಕರ್ಯಗಳು ಮತ್ತು ಖಾಸಗಿ ವಾಹನಗಳ ಸೌಲಭ್ಯಗಳು ಇರುತ್ತದೆ.
ಬ್ಯಾಂಕ್ ಸೌಕರ್ಯ : ರಾಷ್ಟ್ರೀಕೃತ ಇಂಡಿಯನ್ ಓವರ್ ಸೀಸ್ ಮತ್ತು ವಿಜಯಾ ಬ್ಯಾಂಕಿನ ಶಾಖೆಗಳು ಸುಬ್ರಹ್ಮಣ್ಯದಲ್ಲಿ ಇದ್ದು ಈ ಬ್ಯಾಂಕಿನ ಯಾವುದೇ ಶಾಖೆಯಿಂದ ದೇವಸ್ಥಾನದಲ್ಲಿ ನಡೆಸುವ ಸೇವೆಗಳಿಗೆ ಕಾಣಿಕೆಗಳನ್ನು ಕಳುಹಿಸಬಹುದು. ಅಲ್ಲದೆ ಇನ್ನಿತರ ಯಾವುದೇ ಬ್ಯಾಂಕಿನ ಚೆಕ್ ಅಥವಾ ಡಿಮಾಂಡಡ್ಡ್ರಾಫ್ಟ್ ಮೂಲಕ ಕಾಣಿಕೆಗಳನ್ನು ಕಳುಹಿಸಬಹುದು. ರೂ.25/- ಕ್ಕಿಂತ ಹೆಚ್ಚು ಕಾಣಿಕೆ ಕಳುಹಿಸಿದವರಿಗೆ ಪ್ರಸಾದವನ್ನು ಪೋಸ್ಟ್ ಮೂಲಕ ಕಳುಹಿಸುವ ವ್ಯವಸ್ಥೆ ಇದೆ.
ದೇವಸ್ಥಾನದ ಇತರ ಸೌಕರ್ಯಗಳು : ಕಲೆಗಳಿಗೆ ಪ್ರೋತ್ಸಾಹ : ಯಕ್ಷಗಾನ, ಹರಿಕಥೆ, ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ವಿಶೇಷವಾಗಿ ಉತ್ಸವದ ದಿನಗಳಲ್ಲಿ ಇಟ್ಟುಕೊಳ್ಳುವುದರ ಮೂಲಕ ದೇವಸ್ಥಾನವು ಇವುಗಳ ಪ್ರಚಾರಕ್ಕೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ.
ವಿದ್ಯಾಪ್ರಸಾರ: ಶ್ರೀ ದೇವಳದ ವತಿಯಿಂದ ಸುಬ್ರಹ್ಮಣ್ಯದಲ್ಲಿ 1963ರಲ್ಲಿ ಸ್ಥಾಪನೆಗೊಂಡ ಹೈಸ್ಕೂಲು ಈಗ ಪದವಿಪೂರ್ವ ಕಾಲೇಜಾಗಿ ಪರಿವರ್ತಿತಗೊಂಡಿರುತ್ತದೆ. ಇಲ್ಲಿ ವೃತ್ತಿಪರ ಶಿಕ್ಷಣವೂ ನಡೆಯುತ್ತಿದೆ. 1983ರಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯವು ಸ್ಥಾಪನೆಯಾಗಿದ್ದು ಪ್ರಸ್ತುತ 36ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ವಿಸ್ತಾರವಾದ ಭವ್ಯ ಕಟ್ಟಡವನ್ನು ಹೊಂದಿ ಕಲಿಯುತ್ತಿರುವ ಸುಮಾರು 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಲ್ಲಿ ವಿಧ್ಯಾಭ್ಯಾಸ ನೀಡಲಾಗುತ್ತದೆ ಯಾವುದೇ ಮತಭೇದವಿಲ್ಲದೆ ಮಧ್ಯಾಹ್ನದ ಭೋಜನವನ್ನು ದೇವಸ್ಥಾನದಲ್ಲಿ ಕೊಡಲಾಗುತ್ತಿದೆ. ಅಲ್ಲದೆ ಪ್ರತಿವರ್ಷ ತರಗತಿಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ದೇವಸ್ಥಾನದ ವತಿಯಿಂದ ಧನಸಹಾಯವನ್ನು ಬಹುಮಾನರೂಪದಲ್ಲಿ ನೀಡಲಾಗುತ್ತಿದೆ.
|