- ಕರ್ನಾಟಕ ಸರಕಾರ -
- ಮುಜರಾಯಿ ಇಲಾಖೆ -
ಕುಕ್ಕೆ ಶ್ರಿ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ, ಸುಳ್ಯ ತಾಲೂಕು, ದ.ಕ. 574238 |
ಕೆ.ಎಸ್.ಎಸ್.ಟಿ.ಸಂ.ಸೇವಾ 13/ 2008-09 |
ದೂರವಾಣಿ: 08257 - 281300 |
281224 |
281423 |
ಪ್ರಕಟಣೆ |
ಭಕ್ತಾದಿಗಳ ಗಮನಕ್ಕೆ :- |
ಶ್ರೀ ದೇವಳದಲ್ಲಿ ಸರ್ಪಸಂಸ್ಕಾರ ಸೇವೆ ನಡೆಸಲುದ್ದೇಶಿಸುವ ಭಕ್ತಾದಿಗಳು ಸೇವಾ ಶುಲ್ಕ ರೂ.2,500.00ರ ಬ್ಯಾಂಕ್ ಡಿ.ಡಿ ಯನ್ನು "ಕ್ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ"ದ ಹೆಸರಿಗೆ ತೆಗೆದು ದೇವಳಕ್ಕೆ ಮುಂಚಿತವಾಗಿ ಕಳುಹಿಸಿ ಬುಕ್ಕಿಂಗ್ ಮಾಡಿಸಿಕೊಳ್ಳತಕ್ಕದ್ದು. ಡಿ.ಡಿ. ತಲುಪಿದ ನಂತರ ದೇವಳದಿಂದ ದಿನ ನಿಗದಿಪಡಿಸಿ ರಶೀದಿಯನ್ನು ಕಳುಹಿಸಲಾಗುವುದು. ಅಲ್ಲದೇ ಸ್ವತಃ ನಗದಿನಿಂದ ದೇವಳದ ಕಛೇರಿಯಲ್ಲಿ ಪಾವತಿಸಿ ಕೂಡಾ ಬುಕ್ಕಿಂಗ್ ಮಾಡಿಸಬಹುದು. ದಿನಾಂಕ 01-01-2011 ಅಥವಾ ಆನಂತರ ನಡೆಯುವ ಸದರಿ ಸೇವೆಗಳಿಗೆ ಈ ದರವು ಮುಂದಿನ ಪ್ರಕಟಣೆವರೇಗೆ ಜ್ಯಾರಿಯಲ್ಲಿರುವುದು.
ಶ್ರೀ ದೇವಳದ ಅಧಿಕೃತ ರಶೀದಿ ಹೊರತಾಗಿ ಕ್ಷೇತ್ರದ ಇನ್ನಿತರ ಯಾವುದೇ ಮಠ, ಮಂದಿರ, ನದಿ ತೀರ ಹಾಗೂ ಕಲ್ಯಾಣ ಮಂಟಪ ಇತ್ಯಾದಿ ಕಡೆಗಳಲ್ಲಿ ಇನ್ನಿತರರಿಂದ ನಡೆಸಲ್ಪಡುವ ಸೇವೆ ಯಾ ಕಾಣಿಕೆಗಳು ತೀರಾ ಖಾಸಗಿಯಾಗಿದ್ದು, "ಕುಕ್ಕೆ ಶ್ರೀ ಸುಬ್ರಹ್ಮಣ್ಯ" ದೇವರಿಗೆ ಸಂದಾಯವಾಗಲಅರದು ಎಂಬ ವಿಚಾರವನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಭಕ್ತಾದಿಗಳಿಗೆ ಈ ಮುಲಕ ದೇವಳದ ಆಡಳಿತೆಯು ಸ್ಪಷ್ಟ ಪಡಿಸುತ್ತದೆ. |
|
ಆಡಳಿತಾಧಿಕಾರಿ, |
ಕಾರ್ಯನಿರ್ವಹಣಾಧಿಕಾರಿ, |
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, |
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, |
ಸುಬ್ರಹ್ಮಣ್ಯ,ಸುಳ್ಯ ತಾಲೂಕು,ದ.ಕ, |
ಸುಬ್ರಹ್ಮಣ್ಯ,ಸುಳ್ಯ ತಾಲೂಕು,ದ.ಕ, |