ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಲೂಕಿನಲ್ಲಿ ನೆಲೆದಿದೆ.ಈ ದೇವಸ್ಥಾನ ಸುಬ್ರಹ್ಮಣ್ಯ ಗ್ರಾಮದ ಮಧ್ಯ ಭಾಗದಲ್ಲಿ ಇದೆ.ಕುಕ್ಕೆ ನದಿ,ಬೆಟ್ಟ ಹಾಗೂ ಕಾಡೂಗಳಿಂದ ಸುತ್ತಿಕೊಂಡಿದೆ.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕುಕ್ಕೆಯ ಮುಖ್ಯ ಆರಾಧ್ಯ ದೇವರು. ದೇವಸ್ಥಾನದ ಮುಖ್ಯ ದ್ವಾರ ಪೂರ್ವದಿಕ್ಕಿನಲ್ಲಿದೆ. ಭಕ್ತಾದಿಗಳು ಕುಕ್ಕೆಯ ಮುಖ್ಯ ದ್ವಾರವನ್ನು ಪಶ್ಚಿಮ ದಿಕ್ಕಿನಿಂದ ಪ್ರವೇಶಿಸಿ, ಒಳ ಭಾಗವನ್ನು ಪೂರ್ವದಿಕ್ಕಿನಿಂದ ಪ್ರವೇಶಿಸುತಾರೆ. ದೇವಸ್ಥಾನದ ಒಳ ಭಾಗದಲ್ಲಿ ಒಂದು ಪೀಠ ಇದೆ, ಅ ಪೀಠದ ಮೇಲ್ಭಾಗದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹ ಹಾಗೂ ಕೆಳಭಾಗದಲ್ಲಿ ವಾಸುಕಿ ಹಾಗೂ ಶೇಶನ ವಿಗ್ರಹವನ್ನು ನೋಡಬಹುದು. ಕುಕ್ಕೆಯ ಒಳ ಭಾಗಕ್ಕೆ ಪ್ರವೇಶಿಸುವಾಗ ಭಕ್ತರು ತಮ್ಮ ಶರ್ಟು ಹಾಗು ಬನಿಯಾನುಗಳನ್ನು ತೆಗೆಯಬೇಕು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕರ್ನಾಟಕ ಸರಕಾರದ ಮುಜರೈ ವಿಭಾಗದ ಆಧಿಪತ್ಯದಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ನಾಗಗಳ ನೆಲೆ. ಇಲ್ಲಿ ಸುಬ್ರಹ್ಮಣ್ಯ ಸ್ವಾಮಿ ಹಾಗು ಸರ್ಪ ರಾಜ ವಾಸುಕಿಯನ್ನು ಜೊತೆಯಾಗಿ ಪೂಜಿಸುತಾರೆ. ಇಲ್ಲಿ ನಾಗದೋಶಗಳಿಂದ ಮುಕ್ತಿ ಸಿಗುವುದಾಗಿ ಬಕ್ತರ ನಂಬಿಕೆ.ಸಾವಿರಾರು ಬಕ್ತರು ದೂರದಿಂದ ಇಲ್ಲಿಗೆ ಸರ್ಪ ಸಂಸ್ಕಾರ, ನಾಗಪ್ರತಿಶ್ಟ , ಆಶ್ಲೇಶಬಲಿ ಹಾಗೂ ಇನ್ನು ಇತರ ಪೂಜೆಗಳನ್ನು ಸಲ್ಲಿಸಲು ಬರುತಾರೆ.