Select Language:

ಇತಿಹಾಸ

ಕುಕ್ಕೆ ಸುಬ್ರಹ್ಮಣ್ಯವು 'ಧಾರಾ' ನದಿಯ ದಂಡೆಯಲ್ಲಿದೆ. ಹಿಂದೂ ಪುರಾಣ ಗ್ರಂಥಗಳ ಪ್ರಕಾರ ದೇವಸೇನಾಪತಿ ಕುಮಾರಸ್ವಾಮಿಯು ತಾರಕ-ಶೂರಪದ್ಮಾಸುರ ಮತ್ತಿತರ ರಾಕ್ಷಸರನ್ನು ಕೊಂದು ಈ ಸ್ಥಳಕೆ ಬಂದನು. ರಕ್ತಸಿಕ್ತವಾದ ತನ್ನ ಶಕ್ತಿಯಾಯುಧವನ್ನು ಈ ನದಿಯಲ್ಲಿ ತೊಳೆದನು. ಈ ಘಟನೆಯ ಆನಂತರ ಈ ನದಿ ಕುಮಾರಧಾರೆಯೆಂದು ಪ್ರಸಿದ್ದವಾಯಿತು.

 

            ರಾಕ್ಷಸರೊಂದಿಗಿನ ಯುದ್ದಾನಂತರ ಕುಮಾರಸ್ವಾಮಿಯು ಸೋದರ ಗಣೇಶ, ವೀರಬಾಹು ಮೊದಲಾದ ಸಹಚರರೊಂದಿಗೆ ಕುಮಾರ ಪರ್ವತದ ತುದಿ ಭಾಗಕ್ಕೆ ಬಂದನು. ದೇವೇಂದ್ರನೇ ಮೊದಲಾದವರು ಆತನನ್ನು ಸ್ವಾಗತಿಸಿದರು. ರಾಕ್ಷಸರೊಂದಿಗಿನ ಯುದ್ದದಲ್ಲಿ ಗೆದ್ದ ಸಂತೋಷಕ್ಕಾಗಿ ದೇವೇಂದ್ರನು ತನ್ನ ಮಗಳು ದೇವಸೇನೆಯನ್ನು ಮದುವೆಯಾಗುವಂತೆ ಯಾಚಿಸಿದರು. ಸ್ವಾಮಿಯು ಈ ಯಾಚನೆಯನ್ನು ಮನ್ನಿಸಿದನು. ಈ ಮದುವೆಯೂ ಮಾರ್ಗಶಿರ ಮಾಸದ ಶುಧ್ದ ಷಷ್ಠಿಯಂದು ಸಂಪನ್ನಗೊಂಡಿತು. ಈ ಸ್ಥಳದಲ್ಲಿ ತಪಸ್ಸನ್ನು ಮಾಡಿಕೊಂಡಿದ್ದ ನಾಗರಾಜನಾದ ವಾಸುಕಿಗೆ ಶ್ರೀ ಸ್ವಾಮಿಯ ದರ್ಶನ ನೀಡಿದನು ಹಾಗು ಇಲ್ಲಿ ಆತನೊಂದಿಗೆ ಶಾಶ್ವತವಾಗಿ ನೆಲೆಸಲು ತಿಳಿಸಿ, ಆನೇಕ ವಿಧವಾದ ವರಗಳನ್ನು ನೀಡಿದನು.

 

         ಆ ಸಮಯದಿಂದ ಸ್ವಾಮಿಯು ತನ್ನ ಆಧ್ಯಾತ್ಮಿಕ ಶಕ್ತಿಯೊಂದಿಗೆ(ದೈವಿಕ) ಹಾಗು ಪತ್ನಿ ದೇವಸೇನೆ ಮತ್ತು ವಾಸುಕಿಯೊಂದಿಗೆ ನೆಲೆಸಿರುವನೆಂದು ನಂಬಲಾಗಿದೆ. ಪ್ರತಿ ವರ್ಷ ಇಲ್ಲಿ ಪ್ರಸಿಧ್ದವಾದ ವಾರ್ಷಿಕ ರಥೋತ್ಸವವು ವಿಶೇಷ ಪೂಜೆಯೊಂದಿಗೆ ಮಾರ್ಗಶಿರ ಮಾಸದ ಶುಧ್ದ ಷಷ್ಠಿಯಂದು 'ಚಂಪಾ ಷಷ್ಠಿ' ಎಂಬ ಹೆಸರಿನಲ್ಲಿ ಜರಗುತ್ತಿರುವುದು.

 

         ಇನ್ನೊಂದು ಪುರಾಣ ಹೇಳಿಕೆಯಂತೆ ತಾರಕ-ಶೂರಪದ್ಮಾಸುರ ಮತ್ತಿತರ ರಾಕ್ಷಸರನ್ನು ಅವರ ಅನುಯಾಯಿಗಳನ್ನು ಯುದ್ದದಲ್ಲಿ ಕೊಂದು ನಂತರ ಷಣ್ಮುಖ ಸ್ವಾಮಿಯು ತನ್ನ ಸೋದರ ಗಣೇಶ ಹಾಗು ಮತ್ತಿತರೊಂದಿಗೆ ಕುಮಾರ ಪರ್ವತಕ್ಕೆ ಬಂದನು. ಅಲ್ಲಿ ದೇವೇಂದ್ರ ಹಾಗು ಇತರರಿಂದ ಸ್ವಾಗತಿಸಲ್ಪಟ್ಟನು. ಬಹು ಸಂತೋಷನಾದ ದೇವೇಂದ್ರನು ತನ್ನ ಮಗಳು ದೇವಸೇನೆಯನ್ನು ವಿವಾಹವಾಗಿ ಸ್ವೀಕರಿಸಬೇಕೆಂದು ಬೇಡಿಕೊಂಡನು. ಆಗ ಸ್ವಾಮಿಯು ಸಂತೋಷನಾಗಿ ಒಪ್ಪಿದನು. ಈ ದೈವಿಕ ವಿವಾಹವು ಮಾರ್ಗಶಿರ ಮಾಸದ ಶುಧ್ದ ಷಷ್ಠಿಯಂದು ಕುಮಾರ ಪರ್ವತದಲ್ಲಿ ನೆರೆವೇರಿತು. ಬ್ರಹ್ಮ, ವಿಷ್ಣು, ಮಹೆಶ್ವರರೇ ಮೊದಲಾದ ದೇವತೆಗಳು ಈ ವಿವಾಹ ಹಾಗು ಸಿಂಹಾಸನಾರೋಹಣ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ವಿವಿಧ ನದಿಗಳ ಜಲಗಳನ್ನು ತರಲಾಗಿತ್ತು. ಮಹಾವೈಷಿಷ್ಟ್ಯದ ಈ ಪವಿತ್ರ ಜಲ ಕೆಳಗೆ ಹರಿದು ನದಿಯ ರೂಪ ತಾಳಿತು ಮತ್ತು ಅದು 'ಕುಮಾರಧಾರಾ' ನದಿಯೆಂಬ ಹೆಸರಿನಿಂದ ಪ್ರಸಿದ್ದವಾಯಿತು.

 

        ಮಹಾಶಿವ ಭಕ್ತ ಹಾಗು ನಾಗರಾಜನಾದ ವಾಸುಕಿಯು ಕುಕ್ಕೆ ಸುಬ್ರಹ್ಮಣ್ಯದ ಬಿಲ್ವದ್ವಾರಾ ಎಂಬ ಗುಹೆಯಲ್ಲಿ ಗರುಡನ ದಾಳಿಯಿಂದ ಪಾರಾಗಲು ಆನೇಕ ವರ್ಷಗಳಿಂದ ತಪಸ್ಸನ್ನು ಮಾಡಿ ಬರುತ್ತಿದನು. ಸ್ವಾಮಿ ಶಂಕರನ ಆಶ್ವಾಸನೆಯಂತೆ ಷಣ್ಮುಖನು ವಾಸುಕಿಗೆ ದರ್ಶನ ನೀಡಿದನು ಮತ್ತು ತನ್ನ ಪರಮ ಭಕ್ತನಾದ ಆತನೊಂದಿಗೆ ಶಾಶ್ವತವಾಗಿ ನೆಲೆನಿಲ್ಲುವುದಾಗಿ ಆಭಯ ನೀಡಿದನು.

        ಹಾಗಾಗಿ ವಾಸುಕಿಗೆ ಸಲ್ಲಿಸುವ ಸೇವೆ, ಪೂಜಾದಿಗಳಲ್ಲಿ ಆದು ಬೇರೆಯಲ್ಲದೆ ಸ್ವಾಮಿ ಸುಬ್ರಹ್ಮಣ್ಯನಿಗೆ ಸಲ್ಲಿಸುವ ಸೇವೆಗಳೇ ಆಗಿದೆ.

 
ಸುದ್ದಿಯಲ್ಲಿ
News
ಇದು

Read More
ವಿಶೇಷ ದಿನಗಳು
There are no news items to be displayed










Read More

( c ) 2010. All Rights Reserved. designed by InvenTest.