Select Language:

ನಮ್ಮ ಬಗ್ಗೆ

ಕುಕ್ಕೆ ಸುಬ್ರಹ್ಮಣ್ಯವು ಪಶ್ಚಿಮ ಘಟ್ಟದ ತಾಳದಲ್ಲಿ ಪ್ರಾಕೃತಿಕ ಸೌಂದರ್ಯದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿದೆ. ಇದು ದಕ್ಷಿಣ ಭಾರತದ ಅತಿ ಪ್ರಸಿದ್ಧವು, ಅತಿ ಶ್ರೀಮಂತವು ಆದ ದೇಗುಲಗಳಲ್ಲಿ ಒಂದಾಗಿದೆ. ಇದು ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಧರ್ಮಸ್ಥಳ ಹಾಗೂ ಇತರ ಸ್ಥಳಗಳೊಂದಿಗೆ ನೇರ ಸಂಪರ್ಕಹೊಂದಿದೆ. ಇದರ ಪೂರ್ವದಲ್ಲಿ ಕೊಡಗು ಜಿಲ್ಲೆ, ಪಶ್ಚಿಮದಲ್ಲಿ ಪುತ್ತೂರು ತಾಲೂಕು, ಉತ್ತರದಲ್ಲಿ ಹಾಸನ ಜಿಲ್ಲೆ, ಸಕಲೇಶ್ಪುರ ತಾಲೂಕು ಮತ್ತು ದಕ್ಷಿಣದಲ್ಲಿ ತಾಲೂಕು ಕೇಂದ್ರವಾದ ಸುಳ್ಯ ನಗರಗಳಿವೆ. ಈ ಎಲ್ಲಾ ಪ್ರದೇಶಗಳಿಗೆ ಸುಬ್ರಹ್ಮಣ್ಯದಿಂದ ನೇರ ಬಸ್ ಸೌಲಭ್ಯಗಳಿವೆ.

 

       ಸುಬ್ರಹ್ಮಣ್ಯವು ಪ್ರಾಚೀನಕಾಲದಲ್ಲಿ ಕುಕ್ಕೆ ಪಟ್ಟಣವೆಂದು ಕರೆಯಲ್ಪಡುತ್ತಿತ್ತು. ಆನಂದಗಿರಿ ವಿರಚಿತ 'ಶಂಕರ ವಿಜಯ'ದಲ್ಲಿ ಆಚಾರ್ಯ ಶಂಕರರು ತಮ್ಮ ಸಂಚಾರದ ಸಂದರ್ಭದಲ್ಲಿ ಕೆಲವು ದಿನ ಇಲ್ಲಿ ತಂಗಿದ್ದಾಗಿ ಹೇಳಲಾಗಿದೆ. ಆದಿಗುರು ಅಚಾರ್ಯ ಶಂಕರರು ತಮ್ಮ 'ಸುಬ್ರಹ್ಮಣ್ಯ ಭುಜಂಗ ಪ್ರಯುತ ಸ್ತೋತ್ರಮ್'ನಲ್ಲಿ 'ಭಜೆ ಕುಕ್ಕೆಲಿಂಗಂ' ಎಂದು ಇಲ್ಲಿಯ ದೇವರನ್ನು ಸ್ತುತಿಸಿದ್ದಾರೆ.

 

       ಸ್ಕಂದಪುರಾಣದ ಸನತಕುಮಾರ ಸಂಹಿತೆಯ 'ತೀರ್ಥಕ್ಷೇತ್ರ ಮಹಿಮಾನಿ ಪುರಾಣವೆಂಬ ಆಧ್ಯಾಯದಲ್ಲಿ, ಈ ಕ್ಷೇತ್ರವನ್ನು ವೈಭವದಿಂದ ವರ್ಣಿಸಲಾಗಿದೆ. ಈ ಕ್ಷೇತ್ರವು ಕುಮಾರ ಪರ್ವತದಿಂದ ಹರಿದು ಬರುವ 'ಧಾರಾ' ನದಿಯ ದಂಡೆಯಲ್ಲಿದೆ. ಆ ನದಿ ಮತ್ತೆ ಪಶ್ಚಿಮ ಸಮುದ್ರವನ್ನು ಸೇರುವುದು.

 

 
ಸುದ್ದಿಯಲ್ಲಿ
News
ಇದು

Read More
ವಿಶೇಷ ದಿನಗಳು
There are no news items to be displayed










Read More

( c ) 2010. All Rights Reserved. designed by InvenTest.